ಟರ್ಕಿ

Context of ಟರ್ಕಿ

ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ ) ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.

Map

Videos