ಸ್ವಿಟ್ಜರ್ಲ್ಯಾಂಡ್

  • Zermatt

Context of ಸ್ವಿಟ್ಜರ್ಲ್ಯಾಂಡ್

ಸ್ವಿಟ್ಜರ್ಲೆಂಡ್‌‌ (German: [die Schweiz] French: la Suisse, ಇಟಾಲಿಯನ್:Svizzera, Romansh: [Svizra] ), ಅಧಿಕೃತವಾಗಿ ಸ್ವಿಸ್‌ ಒಕ್ಕೂಟ (ಲ್ಯಾಟಿನ್‌ನಲ್ಲಿ ಕಾನ್‌ಪೊಡೆರೇಷ್ಯೋ ಹೆಲ್ವೆಟಿಕಾ, ಆದ್ದರಿಂದ ಇದರ ISO ರಾಷ್ಟ್ರ ಸಂಕೇತಗಳಾಗಿ CH ಮತ್ತು CHEಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ ಭೂಪ್ರದೇಶದಿಂದ ಆವೃತವಾದ ಪರ್ವತ ಪ್ರದೇಶ ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ ಪಶ್ಚಿಮ ಯೂರೋಪ್‌ನ ರಾಷ್ಟ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಕ್ಯಾಂಟನ್‌ಗಳೆಂದು ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್‌ ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು ಜಾಗತಿಕ ಮಹಾನಗರಗಳಾದ ಜಿನೀವಾ ಮತ್ತು ಜ್ಯೂರಿಚ್‌ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್‌‌ ಕನಿಷ್ಟ ತಲಾವಾರು GDP $67,384ನ್ನು ಹೊಂದಿ ತಲಾ ಸಮಗ್ರ ದೇಶೀಯ ಉತ್ಪನ್ನದ ಆಧಾರದಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಜ್ಯೂರಿಚ್‌ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ. ಸ್ವಿಟ್ಜರ್ಲೆಂಡ್‌‌ ಉತ್ತರದಲ್ಲಿ ಜರ್ಮನಿಯನ್...ಮುಂದೆ ಓದಿ

ಸ್ವಿಟ್ಜರ್ಲೆಂಡ್‌‌ (German: [die Schweiz] French: la Suisse, ಇಟಾಲಿಯನ್:Svizzera, Romansh: [Svizra] ), ಅಧಿಕೃತವಾಗಿ ಸ್ವಿಸ್‌ ಒಕ್ಕೂಟ (ಲ್ಯಾಟಿನ್‌ನಲ್ಲಿ ಕಾನ್‌ಪೊಡೆರೇಷ್ಯೋ ಹೆಲ್ವೆಟಿಕಾ, ಆದ್ದರಿಂದ ಇದರ ISO ರಾಷ್ಟ್ರ ಸಂಕೇತಗಳಾಗಿ CH ಮತ್ತು CHEಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ ಭೂಪ್ರದೇಶದಿಂದ ಆವೃತವಾದ ಪರ್ವತ ಪ್ರದೇಶ ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ ಪಶ್ಚಿಮ ಯೂರೋಪ್‌ನ ರಾಷ್ಟ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಕ್ಯಾಂಟನ್‌ಗಳೆಂದು ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್‌ ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು ಜಾಗತಿಕ ಮಹಾನಗರಗಳಾದ ಜಿನೀವಾ ಮತ್ತು ಜ್ಯೂರಿಚ್‌ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್‌‌ ಕನಿಷ್ಟ ತಲಾವಾರು GDP $67,384ನ್ನು ಹೊಂದಿ ತಲಾ ಸಮಗ್ರ ದೇಶೀಯ ಉತ್ಪನ್ನದ ಆಧಾರದಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಜ್ಯೂರಿಚ್‌ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ. ಸ್ವಿಟ್ಜರ್ಲೆಂಡ್‌‌ ಉತ್ತರದಲ್ಲಿ ಜರ್ಮನಿಯನ್ನು, ಪಶ್ಚಿಮದಲ್ಲಿ ಫ್ರಾನ್ಸ್‌ನ್ನು, ದಕ್ಷಿಣದಲ್ಲಿ ಇಟಲಿ ಮತ್ತು ಪೂರ್ವದಲ್ಲಿ ಲಿಯೆಕ್‌ಟೆನ್ಸ್ಟೀನ್‌, ಆಸ್ಟ್ರಿಯಾಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು ರೆಡ್‌ ಕ್ರಾಸ್‌, ವಿಶ್ವ ವ್ಯಾಪಾರ ಸಂಘಟನೆ ಮತ್ತು U.N.ನ ಎರಡು ಐರೋಪ್ಯ ಶಾಖೆಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು ಐರೋಪ್ಯ ಒಕ್ಕೂಟದ ಭಾಗವಾಗದೇ ಇದ್ದರೂ, ಇದು ಷೆಂಗನ್‌ ಒಪ್ಪಂದಕ್ಕೆ ಬದ್ಧವಾಗಿದೆ. ಜರ್ಮನ್‌, ಫ್ರೆಂಚ್‌, ಇಟಾಲಿಯನ್‌ ಮತ್ತು ರೋಮನ್ಷ್‌ ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್‌‌ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್‌ ಭಾಷೆಯಲ್ಲಿ Schweizerische Eidgenossenschaft, ಫ್ರೆಂಚ್‌ನಲ್ಲಿ Confédération suisse, ಇಟಾಲಿಯನ್‌ ಭಾಷೆಯಲ್ಲಿ Confederazione Svizzera ಮತ್ತು ರೋಮಾನ್ಷ್‌ನಲ್ಲಿ Confederaziun svizra ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌‌ನ ಸ್ಥಾಪನೆಯು 1291ರ ಆಗಸ್ಟ್‌ 1ರಲ್ಲಿ ಆಗಿದ್ದುದರಿಂದ; ಸ್ವಿಸ್ ರಾಷ್ಟ್ರೀಯ ದಿನವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ.

More about ಸ್ವಿಟ್ಜರ್ಲ್ಯಾಂಡ್

Map

Videos