ಪೆರು

Context of ಪೆರು

ಪೆರು ( ಅಧಿಕೃತವಾಗಿ ಪೆರು ಗಣರಾಜ್ಯ) ದಕ್ಷಿಣ ಅಮೆರಿಕ ಖಂಡದ ಪಶ್ಚಿಮ ಭಾಗದಲ್ಲಿರುವ ಒಂದು ರಾಷ್ಟ್ರ. ಇದು ಪೂರ್ವಕ್ಕೆ ಬ್ರೆಜಿಲ್ ಆಗ್ನೇಯಕ್ಕೆ ಬೊಲಿವಿಯ ದಕ್ಷಿಣಕ್ಕೆ ಚಿಲಿ ಉತ್ತರಕ್ಕೆ ಎಕ್ವಡಾರ್ ಹಾಗೂ ಕೊಲೊಂಬಿಯ ಮತ್ತು ಪಶ್ಚಿಮಕ್ಕೆ ಶಾಂತಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ಪೆರು ಪ್ರದೇಶವು ಜಗತ್ತಿನ ಅತಿ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ನಾರ್ಟೆ-ಚಿಕೋ ನಾಗರಿಕತೆಗೆ, ಇಂಕಾ ಸಾಮ್ರಾಜ್ಯಕ್ಕೆ ನೆಲೆಯಾಗಿತ್ತು. ಅಲ್ಲದೆ ಕೊಲಂಬಸ್ ಅಮೆರಿಕ ಖಂಡದಲ್ಲಿ ಕಾಲಿಡುವ ಸಮಯದಲ್ಲಿ ಅಲ್ಲಿನ ಅತಿ ದೊಡ್ಡ ದೇಶವಾಗಿತ್ತು. ೧೬ನೆಯ ಶತಮಾನದಲ್ಲಿ ಸ್ಪೇನ್ನ ಸಮ್ರಾಟರು ಪೆರುವನ್ನು ವಶಪಡಿಸಿಕೊಂಡು ಇಲ್ಲಿ ತಮ್ಮ ದಕ್ಷಿಣ ಅಮೆರಿಕದ ಎಲ್ಲಾ ವಸಾಹತುಗಳನ್ನೊಳಗೊಂಡ ಒಂದು ವೈಸರಾಯಲ್ಟಿಯನ್ನು ಸ್ಥಾಪಿಸಿದರು. ೧೮೨೧ರಲ್ಲಿ ಸ್ವಾತಂತ್ಯ್ರ ಪಡೆದ ಪೆರು ನಂತರದ ದಿನಗಳಲ್ಲಿ ರಾಜಕೀಯವಾಗಿ ಮತ್ಥು ಆರ್ಥಿಕವಾಗಿ ಹಲವು ಏಳು ಬೀಳುಗಳನ್ನು ಕಂಡಿದೆ. ಪೆರು ಒಂದು ಅಧ್ಯಕ್ಷೀಯ ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯ. ಪೆರು ಭೌಗೋಳಿಕವಾಗಿ ವಿವಿಧ ವಲಯಗಳನ್ನುಳ್ಳ ದೇಶ. ಪಶ್ಚಿಮದ ಶಾಂತಸಾಗರದ ತೀರದ ಬಯಲು ಪ್ರದೇಶವು ಅತಿ ಶುಷ್ಕ ವಲಯ. ಪೂರ್ವದಲ್ಲಿ ಆಂಡೆಸ್ ಪರ್ವತಶ್ರೇಣಿಯ ಉನ್ನತ ಶಿಖರಗಳು ಹಾಗೂ ಅಮೆಝಾನ್ ಕೊಳ್ಳದ ಉಷ್ಣವಲಯದ ಮಳೆಕಾಡುಗಳಿವೆ. ೧೨,೮೫,೨೨೦ ಚ.ಕಿ.ಮೀ. ವಿಸ್ತೀರ್ಣವುಳ್ಳ ಪೆರುವಿನ ಜನಸಂಖ್ಯೆ ಸುಮಾರು ೨ ಕೋಟಿ ೮೭ ಲಕ್ಷ. ರಾಷ್ಟ್ರದ ರ...ಮುಂದೆ ಓದಿ

ಪೆರು ( ಅಧಿಕೃತವಾಗಿ ಪೆರು ಗಣರಾಜ್ಯ) ದಕ್ಷಿಣ ಅಮೆರಿಕ ಖಂಡದ ಪಶ್ಚಿಮ ಭಾಗದಲ್ಲಿರುವ ಒಂದು ರಾಷ್ಟ್ರ. ಇದು ಪೂರ್ವಕ್ಕೆ ಬ್ರೆಜಿಲ್ ಆಗ್ನೇಯಕ್ಕೆ ಬೊಲಿವಿಯ ದಕ್ಷಿಣಕ್ಕೆ ಚಿಲಿ ಉತ್ತರಕ್ಕೆ ಎಕ್ವಡಾರ್ ಹಾಗೂ ಕೊಲೊಂಬಿಯ ಮತ್ತು ಪಶ್ಚಿಮಕ್ಕೆ ಶಾಂತಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ಪೆರು ಪ್ರದೇಶವು ಜಗತ್ತಿನ ಅತಿ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ನಾರ್ಟೆ-ಚಿಕೋ ನಾಗರಿಕತೆಗೆ, ಇಂಕಾ ಸಾಮ್ರಾಜ್ಯಕ್ಕೆ ನೆಲೆಯಾಗಿತ್ತು. ಅಲ್ಲದೆ ಕೊಲಂಬಸ್ ಅಮೆರಿಕ ಖಂಡದಲ್ಲಿ ಕಾಲಿಡುವ ಸಮಯದಲ್ಲಿ ಅಲ್ಲಿನ ಅತಿ ದೊಡ್ಡ ದೇಶವಾಗಿತ್ತು. ೧೬ನೆಯ ಶತಮಾನದಲ್ಲಿ ಸ್ಪೇನ್ನ ಸಮ್ರಾಟರು ಪೆರುವನ್ನು ವಶಪಡಿಸಿಕೊಂಡು ಇಲ್ಲಿ ತಮ್ಮ ದಕ್ಷಿಣ ಅಮೆರಿಕದ ಎಲ್ಲಾ ವಸಾಹತುಗಳನ್ನೊಳಗೊಂಡ ಒಂದು ವೈಸರಾಯಲ್ಟಿಯನ್ನು ಸ್ಥಾಪಿಸಿದರು. ೧೮೨೧ರಲ್ಲಿ ಸ್ವಾತಂತ್ಯ್ರ ಪಡೆದ ಪೆರು ನಂತರದ ದಿನಗಳಲ್ಲಿ ರಾಜಕೀಯವಾಗಿ ಮತ್ಥು ಆರ್ಥಿಕವಾಗಿ ಹಲವು ಏಳು ಬೀಳುಗಳನ್ನು ಕಂಡಿದೆ. ಪೆರು ಒಂದು ಅಧ್ಯಕ್ಷೀಯ ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯ. ಪೆರು ಭೌಗೋಳಿಕವಾಗಿ ವಿವಿಧ ವಲಯಗಳನ್ನುಳ್ಳ ದೇಶ. ಪಶ್ಚಿಮದ ಶಾಂತಸಾಗರದ ತೀರದ ಬಯಲು ಪ್ರದೇಶವು ಅತಿ ಶುಷ್ಕ ವಲಯ. ಪೂರ್ವದಲ್ಲಿ ಆಂಡೆಸ್ ಪರ್ವತಶ್ರೇಣಿಯ ಉನ್ನತ ಶಿಖರಗಳು ಹಾಗೂ ಅಮೆಝಾನ್ ಕೊಳ್ಳದ ಉಷ್ಣವಲಯದ ಮಳೆಕಾಡುಗಳಿವೆ. ೧೨,೮೫,೨೨೦ ಚ.ಕಿ.ಮೀ. ವಿಸ್ತೀರ್ಣವುಳ್ಳ ಪೆರುವಿನ ಜನಸಂಖ್ಯೆ ಸುಮಾರು ೨ ಕೋಟಿ ೮೭ ಲಕ್ಷ. ರಾಷ್ಟ್ರದ ರಾಜಧಾನಿ ಲಿಮಾ. ಪೆರು ಒಂದು ಅಭಿವೃದ್ಧಿಶೀಲ ರಾಷ್ಟ್ರ. ಕೃಷಿ, ಮೀನುಗಾರಿಕೆ, ಗಣಿಗಾರಿಕೆ ಮತ್ತು ಜವಳಿ ಉದ್ಯಮ ನಾಡಿನ ಪ್ರಮುಖ ಆರ್ಥಿಕ ಚಟುವಟಿಕೆಗಳು. ಪೆರುವಿನ ಜನತೆ ಹಲವು ಜನಾಂಗಗಳಿಗೆ ಸೇರಿದವರು. ಮುಖ್ಯವಾಗಿ ಅಮೆರಿಂಡಿಯನ್ನರು,ಯುರೋಪಿಯನ್ನರು,ಆಫ್ರಿಕನ್ನರು ಹಾಗೂ ಏಷ್ಯನ್ನರು ಇಲ್ಲಿ ನೆಲೆಸಿದ್ದಾರೆ. ಪ್ರಧಾನ ಭಾಷೆ ಸ್ಪಾನಿಷ್. ಉಳಿದಂತೆ ಕ್ವೆಚುವಾ ಮತ್ತು ಹಲವು ಸ್ಥಳೀಯ ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತವೆ. ಬಹುಸಂಖ್ಯಾಕರು ಕ್ಯಾಥೊಲಿಕ್ ಧರ್ಮೀಯರು.

Map

Videos