ಮೊರಾಕೊ

Context of ಮೊರಾಕೊ

ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಅದು ಆಫ್ರಿಕ ಖಂಡದ ವಾಯುವ್ಯದಲ್ಲಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ ಈ ದೇಶದ ಕರಾವಳಿ, ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರದವರೆಗೆ ಹರಡಿದೆ. ಇದರ ದಕ್ಷಿಣಕ್ಕೆ ಮೌರಿಟೇನಿಯ, ಪೂರ್ವಕ್ಕೆ ಅಲ್ಜೀರಿಯ ಮತ್ತು ಉತ್ತರಕ್ಕೆ ಜಿಬ್ರಾಲ್ಟಾರ್ ಸ್ಟ್ರೈಟ್ ಆಚೆಗೆ ಸ್ಪೇನ್ ದೇಶಗಳಿವೆ. ಸ್ಪೇನ್ ದೇಶದ ಎರಡು ನಗರಗಳು ಚ್ಯುಟ ಮತ್ತು ಮೆಲಿಲ್ಲ ಆಫ್ರಿಕಾದ ಖಂಡಭೂಮಿಗೆ ಸೇರಿದ್ದು, ಮೊರಾಕೊ ಇವನ್ನು ಸುತ್ತುವರೆದಿದೆ.

ಉತ್ತರದಲ್ಲಿ ಜಿûಬ್ರಾಲ್ಟರ್ ಜಲಸಂಧಿ, ವ್ಯಾಯುವ್ಯದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ, ಈಶಾನ್ಯದಲ್ಲಿ ಮೆಡಿಟರೇನಿಯನ್ ಸಮುದ್ರ; ಪೂರ್ವ ಆಗ್ನೇಯ ಮತ್ತು ದಕ್ಷಿಣದಲ್ಲಿ ಆಲ್ಜೀರಿಯ, ನೈಋತ್ಯದಲ್ಲಿ ಸ್ಪ್ಯಾನಿಷ್ ಸಹರ ಪ್ರದೇಶ ಸುತ್ತುವರಿದಿದೆ. 1876 ರಲ್ಲಿ ಸೇರ್ಪಡೆಯಾದ ಸ್ಪ್ಯಾನಿಷ್ ಸಹರದ ವಿಸ್ತೀರ್ಣ 252, 120 ಚಕಿಮೀ ಹಾಗೂ ಈ ಪ್ರದೇಶದ ಜನಸಂಖ್ಯೆ 163,868 (1982). ಇದನ್ನು ಬಿಟ್ಟು ಮೊರಾಕೋ ಈ ಪ್ರದೇಶದ ವಿಸ್ತೀರ್ಣ 4,58,730 ಚಕಿಮೀ ಮತ್ತು ಜನಸಂಖ್ಯೆ 2,70,50,000 (1997). ಪೂರ್ವ - ಪಶ್ಚಿಮವಾಗಿ 1.223 ಚಕೀಮಿ ಮತ್ತು...ಮುಂದೆ ಓದಿ

ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಅದು ಆಫ್ರಿಕ ಖಂಡದ ವಾಯುವ್ಯದಲ್ಲಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ ಈ ದೇಶದ ಕರಾವಳಿ, ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರದವರೆಗೆ ಹರಡಿದೆ. ಇದರ ದಕ್ಷಿಣಕ್ಕೆ ಮೌರಿಟೇನಿಯ, ಪೂರ್ವಕ್ಕೆ ಅಲ್ಜೀರಿಯ ಮತ್ತು ಉತ್ತರಕ್ಕೆ ಜಿಬ್ರಾಲ್ಟಾರ್ ಸ್ಟ್ರೈಟ್ ಆಚೆಗೆ ಸ್ಪೇನ್ ದೇಶಗಳಿವೆ. ಸ್ಪೇನ್ ದೇಶದ ಎರಡು ನಗರಗಳು ಚ್ಯುಟ ಮತ್ತು ಮೆಲಿಲ್ಲ ಆಫ್ರಿಕಾದ ಖಂಡಭೂಮಿಗೆ ಸೇರಿದ್ದು, ಮೊರಾಕೊ ಇವನ್ನು ಸುತ್ತುವರೆದಿದೆ.

ಉತ್ತರದಲ್ಲಿ ಜಿûಬ್ರಾಲ್ಟರ್ ಜಲಸಂಧಿ, ವ್ಯಾಯುವ್ಯದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ, ಈಶಾನ್ಯದಲ್ಲಿ ಮೆಡಿಟರೇನಿಯನ್ ಸಮುದ್ರ; ಪೂರ್ವ ಆಗ್ನೇಯ ಮತ್ತು ದಕ್ಷಿಣದಲ್ಲಿ ಆಲ್ಜೀರಿಯ, ನೈಋತ್ಯದಲ್ಲಿ ಸ್ಪ್ಯಾನಿಷ್ ಸಹರ ಪ್ರದೇಶ ಸುತ್ತುವರಿದಿದೆ. 1876 ರಲ್ಲಿ ಸೇರ್ಪಡೆಯಾದ ಸ್ಪ್ಯಾನಿಷ್ ಸಹರದ ವಿಸ್ತೀರ್ಣ 252, 120 ಚಕಿಮೀ ಹಾಗೂ ಈ ಪ್ರದೇಶದ ಜನಸಂಖ್ಯೆ 163,868 (1982). ಇದನ್ನು ಬಿಟ್ಟು ಮೊರಾಕೋ ಈ ಪ್ರದೇಶದ ವಿಸ್ತೀರ್ಣ 4,58,730 ಚಕಿಮೀ ಮತ್ತು ಜನಸಂಖ್ಯೆ 2,70,50,000 (1997). ಪೂರ್ವ - ಪಶ್ಚಿಮವಾಗಿ 1.223 ಚಕೀಮಿ ಮತ್ತು ಉತ್ತರ ದಕ್ಷಿಣವಾಗಿ 703 ಚಕಿಮೀ ಇದ್ದು ಅಟ್ಲಾಂಟಿಕ್ ಸಾಗರದ 985 ಕಿಮೀ ಮತ್ತು ಮೆಡಿಟರೇನಿಯನ್ ಸಮುದ್ರದ 377 ಕಿಮೀ ತೀರಪ್ರದೇಶ ಹೊಂದಿದೆ. ರಾಜಧಾನಿ ರೆಬಾತ್.

More about ಮೊರಾಕೊ

Map

Videos