ಇಟಲಿ

Context of ಇಟಲಿ

ಖ್ಯಾತ ರೋಮನ್ ಸಾಮ್ರಾಜ್ಯದ ಮಾತೃಸ್ಥಾನವಾದ ಇಟಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪ. ಗಾತ್ರದಲ್ಲಿ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದು. ರೋಮನ್ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟು ಬೇರಾವ ಸಾಮ್ರಾಜ್ಯಕ್ಕೂ ಬರಲಾರದು. ರೋಂ ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಅಂದಿನ ನಾಗರಿಕ ಪ್ರಪಂಚವನ್ನೆಲ್ಲ ಏಕಚ್ಛತ್ರದಡಿ ಸಂವರಿಸಿ ಆಳಿತು. ಅದರ ವೈಭವ ಅನನ್ಯವಾದುದು; ಶಕ್ತಿ ಅದಮ್ಯವಾದುದು. ವಿಸ್ತಾರವಾದ ತನ್ನ ಸಾಮ್ರಾಜ್ಯದಲ್ಲಿ ಅದು ಏರ್ಪಡಿಸಿದ ಆಡಳಿತ ವ್ಯವಸ್ಥೆ, ನ್ಯಾಯ, ಜೀವನಕ್ರಮ-ಇವು ಇಡೀ ಸಾಮ್ರಾಜ್ಯದ ಐಕ್ಯಕ್ಕೆ ಸಹಾಯಕವಾದುವು. ರೋಮಿನಿಂದ ನಡೆದ ಈ ಬೃಹತ್ ವ್ಯವಹಾರಕ್ಕೆ ಇಟಲಿಯ ಭೂಮಿ ಆಶ್ರಯ ಕೊಟ್ಟಿತು. ರೋಮನರ ಚರಿತ್ರೆ, ನಾಗರಿಕತೆ, ಸಂಸ್ಕøತಿ, ಕಲೆ ಮೊದಲಾದ ವಿಷಯಗಳು ಅಲ್ಲಲ್ಲಿ ಪ್ರತ್ಯೇಕವಾಗಿ ಬಂದಿವೆ. ಇಲ್ಲಿ ಇಟಲಿಯ ಬಗ್ಗೆ ಬಂದಿರುವ ಲೇಖನಗಳಲ್ಲೂ ಆ ವಿಷಯಗಳ ಸಂಗ್ರಹ ನಿರೂಪಣೆ ಇದೆ. ಇಲ್ಲಿನ ಲೇಖನಗಳ ವ್ಯವಸ್ಥೆ ಹೀಗಿದೆ. ಇಟಲಿ ಎಂಬ ಲೇಖನದಲ್ಲಿ ಅದರ ಭೌಗೋಳಿಕ, ವಾಣಿಜ್ಯ ವಿಷಯಿಕ ವಿವರಗಳಿವೆ. ಇಟಲಿಯ ಇತಿಹಾಸ, ಕಲೆ, ಛಂದಸ್ಸು, ಭಾಷೆ, ಸಂಗೀತ, ಸಾಹಿತ್ಯ, ಸಾಹಿತ್ಯ ವಿಮರ್ಶೆಗಳ ಬಗ್ಗೆ ಪ್ರತ್ಯೇಕ ಶೀರ್ಷಿಕೆಗಳಿವೆ. ಇಟಲಿಯ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಕೆಲ ವಿಷಯಗಳು ಈ ಹರಹಿನಲ್ಲಿ ಬಂದಿವೆಯಾದರೂ ಅವರ ಜೀವನ ಮತ್ತು...ಮುಂದೆ ಓದಿ

ಖ್ಯಾತ ರೋಮನ್ ಸಾಮ್ರಾಜ್ಯದ ಮಾತೃಸ್ಥಾನವಾದ ಇಟಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪ. ಗಾತ್ರದಲ್ಲಿ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದು. ರೋಮನ್ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟು ಬೇರಾವ ಸಾಮ್ರಾಜ್ಯಕ್ಕೂ ಬರಲಾರದು. ರೋಂ ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಅಂದಿನ ನಾಗರಿಕ ಪ್ರಪಂಚವನ್ನೆಲ್ಲ ಏಕಚ್ಛತ್ರದಡಿ ಸಂವರಿಸಿ ಆಳಿತು. ಅದರ ವೈಭವ ಅನನ್ಯವಾದುದು; ಶಕ್ತಿ ಅದಮ್ಯವಾದುದು. ವಿಸ್ತಾರವಾದ ತನ್ನ ಸಾಮ್ರಾಜ್ಯದಲ್ಲಿ ಅದು ಏರ್ಪಡಿಸಿದ ಆಡಳಿತ ವ್ಯವಸ್ಥೆ, ನ್ಯಾಯ, ಜೀವನಕ್ರಮ-ಇವು ಇಡೀ ಸಾಮ್ರಾಜ್ಯದ ಐಕ್ಯಕ್ಕೆ ಸಹಾಯಕವಾದುವು. ರೋಮಿನಿಂದ ನಡೆದ ಈ ಬೃಹತ್ ವ್ಯವಹಾರಕ್ಕೆ ಇಟಲಿಯ ಭೂಮಿ ಆಶ್ರಯ ಕೊಟ್ಟಿತು. ರೋಮನರ ಚರಿತ್ರೆ, ನಾಗರಿಕತೆ, ಸಂಸ್ಕøತಿ, ಕಲೆ ಮೊದಲಾದ ವಿಷಯಗಳು ಅಲ್ಲಲ್ಲಿ ಪ್ರತ್ಯೇಕವಾಗಿ ಬಂದಿವೆ. ಇಲ್ಲಿ ಇಟಲಿಯ ಬಗ್ಗೆ ಬಂದಿರುವ ಲೇಖನಗಳಲ್ಲೂ ಆ ವಿಷಯಗಳ ಸಂಗ್ರಹ ನಿರೂಪಣೆ ಇದೆ. ಇಲ್ಲಿನ ಲೇಖನಗಳ ವ್ಯವಸ್ಥೆ ಹೀಗಿದೆ. ಇಟಲಿ ಎಂಬ ಲೇಖನದಲ್ಲಿ ಅದರ ಭೌಗೋಳಿಕ, ವಾಣಿಜ್ಯ ವಿಷಯಿಕ ವಿವರಗಳಿವೆ. ಇಟಲಿಯ ಇತಿಹಾಸ, ಕಲೆ, ಛಂದಸ್ಸು, ಭಾಷೆ, ಸಂಗೀತ, ಸಾಹಿತ್ಯ, ಸಾಹಿತ್ಯ ವಿಮರ್ಶೆಗಳ ಬಗ್ಗೆ ಪ್ರತ್ಯೇಕ ಶೀರ್ಷಿಕೆಗಳಿವೆ. ಇಟಲಿಯ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಕೆಲ ವಿಷಯಗಳು ಈ ಹರಹಿನಲ್ಲಿ ಬಂದಿವೆಯಾದರೂ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ವಿವರಗಳನ್ನು ಆಯಾ ವ್ಯಕ್ತಿಗಳನ್ನು ಕುರಿತ ಲೇಖನಗಳಲ್ಲಿ ಕೊಟ್ಟಿದೆ. ಇಟಲಿ ದಕ್ಷಿಣ ಯೂರೋಪಿನ ಒಂದು ಗಣರಾಜ್ಯ (ರಿಪಬ್ಲಿಕಾ ಇಟಾಲಿಯಾನ ಅಥವಾ ಇಟಾಲಿಯ). ಯೂರೋಪಿನಿಂದ ದಕ್ಷಿಣಾಭಿಮುಖವಾಗಿ ಮೆಡಿಟರೇನಿಯನ್ ಸಮುದ್ರದೊಳಕ್ಕೆ ಚಾಚಿರುವ ಮೂರು ಪರ್ಯಾಯದ್ವೀಪಗಳಲ್ಲಿ ಮಧ್ಯದ್ದು; ಸಾನ್ ಮರೀನೊ ಮತ್ತು ವ್ಯಾಟಿಕನ್ ನಗರಸೀಮೆಗಳನ್ನು ಬಿಟ್ಟು ಉಳಿದ ಭಾಗವೂ ಈ ಭೂಶಿರದ ಮುಂದಿನ ಭಾಗದಂತಿರುವ ಸಿಸಿಲಿ ದ್ವೀಪವೂ ಸಾರ್ಡಿನಿಯ, ಎಲ್ಬ ಮತ್ತು ಸುಮಾರು ಎಪ್ಪತ್ತು ಸಣ್ಣ ದ್ವೀಪಗಳೂ ಸೇರಿರುವ ಪ್ರದೇಶ. ಎತ್ತರ ಹಿಮ್ಮಡಿಯ ಬೊಟಿನಾಕಾರದ ಈ ಪರ್ಯಾಯದ್ವೀಪ ವಾಯವ್ಯ ದಿಕ್ಕಿನಿಂದ ಆಗ್ನೇಯಕ್ಕೆ ರೈಲುದಾರಿಯ ಕೈಮರದಂತೆ ಚಾಚಿಕೊಂಡಿದೆ. ಉತ್ತರ ಅಕ್ಷಾಂಶ 470 5 ನಿಂದ 350 39 ರವರೆಗೆ 1168 ಕಿ.ಮೀ. ಉದ್ದವಿರುವ ಈ ದೇಶವೆಲ್ಲೊ 240 ಕಿ.ಮೀ.ಗಿಂತ ಅಗಲವಾಗಿಲ್ಲ. ಇದು ಪೂರ್ವಾರ್ಧಗೋಳದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ರೇಖಾಂಶ 60 55 ನಿಂದ 180 30 ವರೆಗೆ ಹಬ್ಬಿದೆ. ಇಟಲಿಗೆ ಉತ್ತರದಲ್ಲಿ ಬಿಲ್ಲಿನಂತೆ ಬಾಗಿ ಹಬ್ಬಿರುವ ಆಲ್ಪ್ಸ್ ಪರ್ವತಶ್ರೇಣಿಯಿಂದ ಫ್ರಾನ್ಸ್ ಸ್ವಿಟ್ಜರ್ಲೆಂಡ್ ಆಸ್ಟ್ರಿಯ ಯುಗೋಸ್ಲಾವಿಯಗಳೂ ಇಟಲಿಯೂ ಪ್ರತ್ಯೇಕಗೊಂಡಿದೆ. ಆಲ್ಪ್ಸ್ ಪರ್ವತಶ್ರೇಣಿಯ ನೆತ್ತಿಯ ಗೆರೆಯೇ ಬಹಳಮಟ್ಟಿಗೆ ಇಟಲಿಗೂ ಈ ದೇಶಗಳಿಗೂ ನಡುವಣ ಗಡಿರೇಖೆ. ಇಟಲಿ ಪರ್ಯಾಯದ್ವೀಪದ ವಾಯುವ್ಯದಲ್ಲಿ ಲುಗುರಿಯನ್ ಸಮುದ್ರವೂ ಪಶ್ಚಿಮದಲ್ಲಿ ಟೆರ್ಪೆನಿಯನ್ ಸಮುದ್ರವೂ ಆಗ್ನೇಯದಲ್ಲಿ ಐಯೊನಿಯನ್ ಸಮುದ್ರವೂ ಪೂರ್ವದಲ್ಲಿ ಒಡ್ರಿಯಾಟಿಕ್ ಸಮುದ್ರವೂ ಇವೆ. ಸಿಸಿಲಿ ದ್ವೀಪಕ್ಕೂ ಆಫ್ರಿಕಕ್ಕೂ ನಡುವೆ ಇರುವ ಸಿಸಿಲಿಯನ್ ಜಲಸಂಧಿಯ ಅಗಲ ಕೇವಲ 144 ಕಿ.ಮೀ. ಹೀಗಾಗಿ ಇಟಲಿಯೂ ಸಿಸಿಲಿಯೂ ಮೇಡಿಟರೇನಿಯನ್ ಸಮುದ್ರವನ್ನೇ ಸ್ಥೂಲವಾಗಿ ಇಬ್ಭಾಗಿಸಿದೆ. ಸಿಸಿಲಿ ಸಾರ್ಡಿನಿಯಗಳು ಕೂಡಿದ ಇಟಲಿಯ ಒಟ್ಟು ವಿಸ್ತೀರ್ಣ 3,01,250 ಚ.ಕಿ.ಮೀ. ಆಡಳಿತ ಸೌಕರ್ಯಕ್ಕಾಗಿ ಇದನ್ನು ಹತ್ತೊಂಬತ್ತು ಭಾಗಗಳಾಗಿ ವಿಂಗಡಿಸಲಾಗಿದೆ. ಇಟಲಿಯ ರಾಜಧಾನಿ ರೋಂ. ಡಿಸೆಂಬರ್ 1967ರಲ್ಲಿದ್ದಂತೆ ಈ ದೇಶದ ಜನಸಂಖ್ಯೆ 5,36,56,000. ದ್ವಿತೀಯ ಯುದ್ಧಾನಂತರದಲ್ಲಿ 1947ರ ಶಾಂತಿ ಕೌಲಿಗೆ ಅನುಗುಣವಾಗಿ ಈ ದೇಶದ ಗಡಿ ನಿಷ್ಕರ್ಷೆಯಾಗಿದೆ. ಯುದ್ಧಪೂರ್ವದಲ್ಲಿ ಇದು ಹೊಂದಿದ್ದ ವಸಾಹತುಗಳ ಮೇಲಣ ಹಕ್ಕುಗಳನ್ನೆಲ್ಲ ಬಿಟ್ಟುಕೊಟ್ಟಿದೆ. ಇದರ ಆಕ್ರಮಣಕ್ಕೆ ಒಳಪಟ್ಟಿದ್ದ ಇಥಿಯೋಪಿಯ (ನೋಡಿ- ಅಬಿಸೀನಿಯ) 1942ರಲ್ಲಿ ತನ್ನ ಸ್ವಾತಂತ್ರ್ಯವನ್ನು ಮತ್ತೆ ಗಳಿಸಿಕೊಂಡಿತು. ಡೊಡೆಕನೀಸನ್ನು 1947ರಲ್ಲಿ ಗ್ರೀಸಿಗೆ ಸೇರಿಸಲಾಯಿತು. (ನೋಡಿ- ಗ್ರೀಸಿನ-ಚರಿತ್ರೆ) ಲಿಬಿಯ 1951ರಲ್ಲಿ ಸ್ವತಂತ್ರವಾಯಿತು. ಎರಿಟ್ಟ್ರಿಯ ಪ್ರದೇಶ 1952ರಲ್ಲಿ ಇಥಯೋಪಿಯ ಒಕ್ಕೊಟದಲ್ಲಿ ಸೇರ್ಪಡೆಹೊಂದಿತು. ಸೋಮಾಲಿಯ 1950ರಲ್ಲಿ ಇಟಲಿಯ ನ್ಯಾಸಾಧಿಕಾರಕ್ಕೊಳಪಟ್ಟಿದ್ದು. 1960ರ ಜುಲೈ ತಿಂಗಳಲ್ಲಿ ಸ್ವತಂತ್ರ ಗಣರಾಜ್ಯವಾಯಿತು.

Map

Videos