ಸುಡಾನ್
Context of ಸುಡಾನ್
ಸುಡಾನ್, ಅಧಿಕೃತವಾಗಿ ಸುಡಾನ್ ಗಣರಾಜ್ಯ ( السودان - ಅಸ್-ಸುಡಾನ್) ಉತ್ತರ ಆಫ್ರಿಕಾದಲ್ಲಿರುವ ಒಂದು ದೇಶ. ಇದು ಆಫ್ರಿಕಾದ ಅತೀ ದೊಡ್ಡ ಹಾಗು ವಿಶ್ವದ ೧೦ನೇ ಅತಿ ದೊಡ್ಡ ದೇಶ. ಇದರ ಉತ್ತರಕ್ಕೆ ಈಜಿಪ್ಟ್, ಈಶಾನ್ಯಕ್ಕೆ ಕೆಂಪು ಸಮುದ್ರ, ಪೂರ್ವಕ್ಕೆ ಎರಿಟ್ರಿಯ ಮತ್ತು ಇಥಿಯೋಪಿಯ, ಆಗ್ನೇಯಕ್ಕೆ ಕೀನ್ಯಾ ಮತ್ತು ಉಗಾಂಡ, ನೈರುತ್ಯಕ್ಕೆ ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಮಧ್ಯ ಆಫ್ರಿಕಾ ಗಣರಾಜ್ಯ, ಪಶ್ಚಿಮಕ್ಕೆ ಚಾಡ್ ಹಾಗು ವಾಯುವ್ಯಕ್ಕೆ ಲಿಬ್ಯಾ ಇವೆ. ಈ ದೇಶದ ಹೆಸರು ಅರಬ್ಬೀ ಭಾಷೆಯ ಬಿಲದ್-ಅಲ್-ಸುದಾನ್, ಅಂದರೆ "ಕಪ್ಪು ಜನರ ನಾಡು", ಇಂದ ಬಂದಿದೆ.
ಸುಡಾನ್ ಆಫ್ರಿಕ ಖಂಡದ ಈಶಾನ್ಯ ಭಾಗದಲ್ಲಿ ಉಕಅ. 40 — 230 ಮತ್ತು ಪೂ.ರೇ. 220 — 390 ನಡುವೆ ಇರುವ ಗಣರಾಜ್ಯ. ವಿಸ್ತೀರ್ಣ 25,05,823 ಚ.ಕಿಮೀ (9,67 ,500 ಚ.ಮೈ.), ಇದು ಆಫ್ರಿಕದ 1/10 ಭಾಗದಷ್ಟಿದೆ. ಜನಸಂಖ್ಯೆ 3.26 ಕೋಟಿ. ರಾಜಧಾನಿ ಖಾರ್ಟೂಮ್. ಇತರ ದೊಡ್ಡ ನಗರಗಳು ಒಮ್ಡುರ್ಮನ್, ಪೋರ್ಟ್‍ಸುಡಾನ್, ಭಾಷೆ ಅರಬ್ಬಿ, ಇಂಗ್ಲಿಷ್, ಡಿನ್‍ಕಾ, ನೂಬಿಮನ್ ಇತ್ಯಾದಿ. ಸಾಕ್ಷರತೆ 46%. ನಾಣ್ಯ ದಿನಾರ್.