المغرب

ಮೊರಾಕೊ
Ben Javelina from Austin Town, USA - CC BY-SA 2.0 Boris Macek - CC BY-SA 3.0 Robert Prazeres - CC BY-SA 4.0 Daniel Csörföly - CC BY-SA 3.0 Robert Prazeres - CC BY-SA 4.0 Val Traveler - CC BY-SA 4.0 Daemon11 - CC BY-SA 4.0 Vitold Muratov - CC BY-SA 3.0 bachmont - CC BY 2.0 Antony Stanley from Gloucester, UK - CC BY-SA 2.0 Momed.salhi - CC BY-SA 4.0 ArnoldBetten at German Wikipedia - Public domain Ayman Abdelilah - CC BY-SA 4.0 Val Traveler - CC BY-SA 4.0 Ben Javelina from Austin Town, USA - CC BY-SA 2.0 Bernard Gagnon - CC BY-SA 3.0 Ibrahim raji - CC BY-SA 3.0 Zanatos - CC BY-SA 4.0 Ben Javelina from Austin Town, USA - CC BY-SA 2.0 Robert Prazeres - CC BY-SA 4.0 bachmont - CC BY 2.0 Hugues - CC BY-SA 2.0 Ben Javelina from Austin Town, USA - CC BY-SA 2.0 Adam Jones, Ph.D. - CC BY-SA 3.0 bachmont - CC BY 2.0 Nubduk - CC BY-SA 4.0 Munfarid1 - CC BY-SA 4.0 Edo 555 (talk) / Edo 555 at en.wikipedia - Public domain *pascal* from Savoie, France - CC BY 2.0 Gonzalo Riestra from España - CC BY 2.0 bachmont - CC BY 2.0 TomiValny - CC BY-SA 4.0 bachmont - CC BY 2.0 TomiValny - CC BY-SA 4.0 TomiValny - CC BY-SA 4.0 TomiValny - CC BY-SA 4.0 ArnoldBetten at German Wikipedia - Public domain Val Traveler - CC BY-SA 4.0 Subhros - CC BY-SA 3.0 Bernard Gagnon - CC BY-SA 3.0 cat_collector - CC BY 2.0 bachmont - CC BY 2.0 bachmont - CC BY 2.0 MarokkoErfahren - CC BY-SA 4.0 TomiValny - CC BY-SA 4.0 Michal Osmenda from Brussels, Belgium - CC BY-SA 2.0 TomiValny - CC BY-SA 4.0 MarokkoErfahren - CC BY-SA 4.0 calflier001 - CC BY-SA 2.0 Errammani abderrazak - CC BY-SA 4.0 Ymblanter - CC BY-SA 3.0 Rosino - CC BY-SA 2.0 Ben Javelina from Austin Town, USA - CC BY-SA 2.0 calflier001 - CC BY-SA 2.0 Bernard Gagnon - CC BY-SA 3.0 Adam Jones, Ph.D. - CC BY-SA 3.0 Vitold Muratov - CC BY-SA 3.0 Michal Osmenda from Brussels, Belgium - CC BY-SA 2.0 Robert Prazeres - CC BY-SA 4.0 nssaw tawahd - FAL Ben Javelina from Austin Town, USA - CC BY-SA 2.0 Robert Prazeres - CC BY-SA 4.0 Cerry Chan - CC BY-SA 3.0 Rodrigo Silva - CC BY 2.0 Jorge Lascar - CC BY-SA 3.0 bachmont - CC BY 2.0 AJFT - CC BY-SA 3.0 Loonybad - CC BY-SA 3.0 No images

Context of ಮೊರಾಕೊ

ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಅದು ಆಫ್ರಿಕ ಖಂಡದ ವಾಯುವ್ಯದಲ್ಲಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ ಈ ದೇಶದ ಕರಾವಳಿ, ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರದವರೆಗೆ ಹರಡಿದೆ. ಇದರ ದಕ್ಷಿಣಕ್ಕೆ ಮೌರಿಟೇನಿಯ, ಪೂರ್ವಕ್ಕೆ ಅಲ್ಜೀರಿಯ ಮತ್ತು ಉತ್ತರಕ್ಕೆ ಜಿಬ್ರಾಲ್ಟಾರ್ ಸ್ಟ್ರೈಟ್ ಆಚೆಗೆ ಸ್ಪೇನ್ ದೇಶಗಳಿವೆ. ಸ್ಪೇನ್ ದೇಶದ ಎರಡು ನಗರಗಳು ಚ್ಯುಟ ಮತ್ತು ಮೆಲಿಲ್ಲ ಆಫ್ರಿಕಾದ ಖಂಡಭೂಮಿಗೆ ಸೇರಿದ್ದು, ಮೊರಾಕೊ ಇವನ್ನು ಸುತ್ತುವರೆದಿದೆ.

ಉತ್ತರದಲ್ಲಿ ಜಿûಬ್ರಾಲ್ಟರ್ ಜಲಸಂಧಿ, ವ್ಯಾಯುವ್ಯದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ, ಈಶಾನ್ಯದಲ್ಲಿ ಮೆಡಿಟರೇನಿಯನ್ ಸಮುದ್ರ; ಪೂರ್ವ ಆಗ್ನೇಯ ಮತ್ತು ದಕ್ಷಿಣದಲ್ಲಿ ಆಲ್ಜೀರಿಯ, ನೈಋತ್ಯದಲ್ಲಿ ಸ್ಪ್ಯಾನಿಷ್ ಸಹರ ಪ್ರದೇಶ ಸುತ್ತುವರಿದಿದೆ. 1876 ರಲ್ಲಿ ಸೇರ್ಪಡೆಯಾದ ಸ್ಪ್ಯಾನಿಷ್ ಸಹರದ ವಿಸ್ತೀರ್ಣ 252, 120 ಚಕಿಮೀ ಹಾಗೂ ಈ ಪ್ರದೇಶದ ಜನಸಂಖ್ಯೆ 163,868 (1982). ಇದನ್ನು ಬಿಟ್ಟು ಮೊರಾಕೋ ಈ ಪ್ರದೇಶದ ವಿಸ್ತೀರ್ಣ 4,58,730 ಚಕಿಮೀ ಮತ್ತು ಜನಸಂಖ್ಯೆ 2,70,50,000 (1997). ಪೂರ್ವ - ಪಶ್...ಮುಂದೆ ಓದಿ

ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಅದು ಆಫ್ರಿಕ ಖಂಡದ ವಾಯುವ್ಯದಲ್ಲಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ ಈ ದೇಶದ ಕರಾವಳಿ, ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರದವರೆಗೆ ಹರಡಿದೆ. ಇದರ ದಕ್ಷಿಣಕ್ಕೆ ಮೌರಿಟೇನಿಯ, ಪೂರ್ವಕ್ಕೆ ಅಲ್ಜೀರಿಯ ಮತ್ತು ಉತ್ತರಕ್ಕೆ ಜಿಬ್ರಾಲ್ಟಾರ್ ಸ್ಟ್ರೈಟ್ ಆಚೆಗೆ ಸ್ಪೇನ್ ದೇಶಗಳಿವೆ. ಸ್ಪೇನ್ ದೇಶದ ಎರಡು ನಗರಗಳು ಚ್ಯುಟ ಮತ್ತು ಮೆಲಿಲ್ಲ ಆಫ್ರಿಕಾದ ಖಂಡಭೂಮಿಗೆ ಸೇರಿದ್ದು, ಮೊರಾಕೊ ಇವನ್ನು ಸುತ್ತುವರೆದಿದೆ.

ಉತ್ತರದಲ್ಲಿ ಜಿûಬ್ರಾಲ್ಟರ್ ಜಲಸಂಧಿ, ವ್ಯಾಯುವ್ಯದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ, ಈಶಾನ್ಯದಲ್ಲಿ ಮೆಡಿಟರೇನಿಯನ್ ಸಮುದ್ರ; ಪೂರ್ವ ಆಗ್ನೇಯ ಮತ್ತು ದಕ್ಷಿಣದಲ್ಲಿ ಆಲ್ಜೀರಿಯ, ನೈಋತ್ಯದಲ್ಲಿ ಸ್ಪ್ಯಾನಿಷ್ ಸಹರ ಪ್ರದೇಶ ಸುತ್ತುವರಿದಿದೆ. 1876 ರಲ್ಲಿ ಸೇರ್ಪಡೆಯಾದ ಸ್ಪ್ಯಾನಿಷ್ ಸಹರದ ವಿಸ್ತೀರ್ಣ 252, 120 ಚಕಿಮೀ ಹಾಗೂ ಈ ಪ್ರದೇಶದ ಜನಸಂಖ್ಯೆ 163,868 (1982). ಇದನ್ನು ಬಿಟ್ಟು ಮೊರಾಕೋ ಈ ಪ್ರದೇಶದ ವಿಸ್ತೀರ್ಣ 4,58,730 ಚಕಿಮೀ ಮತ್ತು ಜನಸಂಖ್ಯೆ 2,70,50,000 (1997). ಪೂರ್ವ - ಪಶ್ಚಿಮವಾಗಿ 1.223 ಚಕೀಮಿ ಮತ್ತು ಉತ್ತರ ದಕ್ಷಿಣವಾಗಿ 703 ಚಕಿಮೀ ಇದ್ದು ಅಟ್ಲಾಂಟಿಕ್ ಸಾಗರದ 985 ಕಿಮೀ ಮತ್ತು ಮೆಡಿಟರೇನಿಯನ್ ಸಮುದ್ರದ 377 ಕಿಮೀ ತೀರಪ್ರದೇಶ ಹೊಂದಿದೆ. ರಾಜಧಾನಿ ರೆಬಾತ್.

More about ಮೊರಾಕೊ

Basic information
  • Native name المغرب
  • Calling code +212
  • Internet domain .ma
  • Mains voltage 220V/50Hz
  • Democracy index 5.04
Population, Area & Driving side
  • Population 37076584
  • Area 710850
  • Driving side right
ಇತಿಹಾಸ
  • ಮೊರಾಕೋ ಯೂರೋಪ್ ಮತ್ತು ಆಫ್ರಿಕಗಳ ನಡುವಿನ ಸಂಪರ್ಕ ಮಾರ್ಗದ ಆಯಕಟ್ಟಿನ ಸ್ಥಳದಲ್ಲಿದೆ. ಆದ್ದರಿಂದ ಫೀನೀಷಿಯನ್ನರು ಮತ್ತು ಕಾರ್ಥೇಜಿಯನ್ನರು ಬಲು ಹಿಂದಿನಿಂದಲೇ ಇಲ್ಲಿ ಬಂದರುಗಳನ್ನು ಹೊಂದಿದ್ದರು. ತರುವಾಯ ಈ ಪ್ರದೇಶ ರೋಮ್ ಸಾಮ್ರಾಜ್ಯದ ನಿಯಂತ್ರಣಕ್ಕೆ ಒಳಪಟ್ಟಿತು. ಅವರು ಇಲ್ಲಿ ಮೊರಿಟೇನಿಯ ಎಂಬ ಪ್ರಾಂತ್ಯವನ್ನು ರಚಿಸಿದ್ದರು. ಕ್ರಿ. ಶ. 7ನೆಯ ಶತಮಾನದಲ್ಲಿ ಮುಸ್ಲಿಮ್ ಪಡೆಗಳು ಈ ಭಾಗದಮೇಲೆ ದಾಳಿಮಾಡಿ ಆಕ್ರಮಿಸಿಕೊಂಡವು. 8ನೆಯ ಶತಮಾನದ ಹೊತ್ತಿಗೆ ಇಲ್ಲಿ ಅನೇಕ ಸಣ್ಣಪುಟ್ಟ ಮುಸ್ಲಿಮ್ ರಾಜ್ಯಗಳು ಹುಟ್ಟಿಕೊಂಡವು. 11ನೆಯ ಶತಮಾನದಲ್ಲಿ ಯೂಸುಫ್ ಇಬ್ನ್ ತಾಸ್‍ಫೆನ್ ನೇತೃತ್ವದಲ್ಲಿ ಸಮಗ್ರ ಮೊರಾಕೋ ಮತ್ತು ಆಲ್ಜೀರಿಯಾದ ಬಹು ಭಾಗಗಳು ಒಂದೇ ಆಡಳಿತದಡಿ ಬಂದವು. 12ನೆಯ ಶತಮಾನದಲ್ಲಿ ಉಚ್ಛ್ರಾಯಕ್ಕೆ ಬಂದ ಅಲ್‍ಮೊಹದರು ಸ್ಪೇನಿನ ಕೆಲವು ಭಾಗಗಳನ್ನೂ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಆದರೆ ಬಲುಬೇಗ ಸ್ಪೇನಿನಿಂದ ಕಾಲ್ತೆಗೆಯಬೇಕಾಯಿತು. 15 ಮತ್ತು 16ನೆಯ ಶತಮಾನಗಳಲ್ಲಿ ಸ್ಪೇನಿಯಾರ್ಡರು ಮತ್ತು ಪೋರ್ಚುಗೀಸರು ತಮ್ಮ ಪೌರಸ್ತ್ಯ ವ್ಯಾಪಾರಕ್ಕಾಗಿ ಮೊರಾಕೋದ ತೀರ ಪ್ರದೇಶಗಳಲ್ಲಿ ನೆಲಸತೊಡಗಿದರು. 17ನೆಯ ಶತಮಾನದ ತನಕ ಐರೋಪ್ಯರು ಒಳನಾಡಿನ ಮೇಲೆ ಪ್ರಭಾವ ಬೀರದಂತೆ ಇಲ್ಲಿಯ ರಾಜ್ಯಗಳು ತಡೆದಿದ್ದುವು. ಆದರೆ 1830ರಲ್ಲಿ ಫ್ರಾನ್ಸ್ ಆಲ್ಜೀರಿಯಾವನ್ನು ವಶಪಡಿಸಿಕೊಂಡಾಗ ಮೊರಾಕೋದ ಹೆಬ್ಬಾಗಿಲಿಗೆ ವಸಾಹತು ಸಾಮ್ರಾಜ್ಯ ಕಾಲಿರಿಸಿದಂತಾಯಿತು. 1844ರಲ್ಲಿ ಫ್ರೆಂಚರು ಮೊರಾಕೋವನ್ನು ಸೋಲಿಸಿದರು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಫ್ರೆಂಚರು ಮೊರಾಕೋದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಫಲರಾದರು. ಫ್ರಾನ್ಸಿನ ಆಡಳಿತವನ್ನು 1904ರಲ್ಲಿ ಬ್ರಿಟನ್ ಮಾನ್ಯ ಮಾಡಿತು.

    ಮೊರಾಕೋದ ದಕ್ಷಿಣ ತೀರಪ್ರದೇಶ ಸ್ಪಾನಿಷ್ ಸಹರದ ಒಂದು ಭಾಗವಾಯಿತು. 1912ರ ಹೊತ್ತಿಗೆ ಮೊರಾಕೋ ಫ್ರಾನ್ಸಿನ ರಕ್ಷಿತ ರಾಜ್ಯವೆಂದು ಪರಿಗಣಿಸಲ್ಪಟ್ಟಿತು. ರಿಫ್‍ನ ಪಂಗಡಗಳು ಅದಲ್-ಕ್ರೀಮ್‍ನ ನೇತೃತ್ವದಲ್ಲಿ ನಡೆಸಿದ ಪ್ರಬಲ ದಂಗೆಯನ್ನು ಫ್ರಾನ್ಸ್ ಅಡಗಿಸಿತು. 1934ರ ಹೊತ್ತಿಗೆ ಫ್ರಾನ್ಸ್ ಮೊರಾಕೋದ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಿತು. ಸುಲ್ತಾನ ನಾಮ ಮಾತ್ರ ದೊರೆಯಾದ.

    1943ರಲ್ಲಿ ಒಂದು ರಾಜಕೀಯ ಸ್ವತಂತ್ರ ಪಕ್ಷ ಹುಟ್ಟಿಕೊಂಡು ಸಂಪೂರ್ಣ ಸ್ವಾತಂತ್ರ್ಯಕ್ಕೆ ಕರೆಕೊಟ್ಟಿತು. 1950-55ರಲ್ಲಿ ರಾಷ್ಟ್ರಾದ್ಯಂತ ಗಲಭೆಗಳಾದುವು. ಪರಿಣಾಮವಾಗಿ ಸುಲ್ತಾನ ಪದವಿ ತ್ಯಾಗಮಾಡಿದ. 1956ರಲ್ಲಿ ಫ್ರಾನ್ಸ್ ಮೊರಾಕೋಗೆ ಸ್ವಾತಂತ್ರ್ಯ ನೀಡಿತು. ಅದೇ ವರ್ಷದ ನವೆಂಬರ್ 12ರಂದು ಮೊರಾಕೋ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು. ಸ್ಪೇನ್ ಸಹ ತನ್ನ ನಿಯಂತ್ರಣದಲ್ಲಿದ್ದ ಕೆಲವು ಪ್ರದೇಶಗಳನ್ನು ಮೊರಾಕೋಗೆ ಬಿಟ್ಟುಕೊಟ್ಟಿತು. ಸ್ಪಾನಿಷ್ ಸಹರದ ಉಳಿದ ಪ್ರದೇಶವನ್ನು 1970ರಲ್ಲಿ ಮೊರಾಕೋ ಮತ್ತು ಅಲ್ಜೀರಿಯಾಗಳು ಪರಸ್ಪರ ಹಂಚಿಕೊಂಡವು.

Phrasebook

ನಮಸ್ಕಾರ
مرحبًا
ವಿಶ್ವ
العالمية
ಹಲೋ ವರ್ಲ್ಡ್
مرحبا بالعالم
ಧನ್ಯವಾದಗಳು
شكرًا لك
ವಿದಾಯ
مع السلامة
ಹೌದು
نعم
ಸಂ
رقم
ನೀವು ಹೇಗಿದ್ದೀರಿ?
كيف حالك؟
ಸರಿ, ದನ್ಯವಾದ
بخير، شكرا لك
ಇದು ಎಷ್ಟು?
كم سعره؟
ಶೂನ್ಯ
صفر
ಒಂದು
واحد

Where can you sleep near ಮೊರಾಕೊ ?

Booking.com
454.690 visits in total, 9.077 Points of interest, 403 Destinations, 29 visits today.